Showing posts with label travel. Show all posts
Showing posts with label travel. Show all posts

Wednesday, December 22, 2010

tirugaalu thippi

ಪ್ಲಿನ್ಕ್ಯ್ ಇಂದು ಯಾತ್ರೆಗಳ ಸಲಹಗಾರತಿಯಾಗಿರುವಳು.


ನನ್ನೆಲ್ಲಿ ಹೋಗಬಯಸುವೆ? ಕಳೆದಸಾರಿ ಬಾಲ್ಯ ಅಂದಿದಕ್ಕೆ, ಈಗ ಸ್ಪೆಸಿಫಿಕ್ಕಾಗಿ ಯಾವೂರು ಎಂದು ಕೇಳಿರುವಳು ಆದೂ multiple choice ಉತ್ತರ ಬರೆದು ಬರೆದು ಮೂರು ಊರುಗಲ್ಳನ್ನು ಆರಿಸಿಯಂದಿರುವಳು

ಭೂಟನ್ ಹಿಮಾಲಯದ ಮಡಿಲ ಪರ್ವತ ಶ್ರೇಣಿ ಹಸಿರು ಉಸಿರ ನಾಡು, ವಾಯು ಸಮುದ್ರರ ಆರ್ಭಟದಿಂದ ಬೇರೆಯೇ ಹಾಡು ಹಾಡುತ್ತದೆ ಶೀತಲ ಮಲಯ ಮಾರುತದ ಅನುಭವ ಉಷ್ಣ ಸಮುದ್ರಗಾಲಿಯೆಂದ ಬೇರೆ. ವಿಹಾರ, ಲಾಮ, ಇವರ ಲೋಕವನ್ನನುಭಾವಿಸುವ ಕನಸು.

ಅಲ್ಲಿಂದ ಚಂಗಿಜ್ ಖಾನನ ಮಂಗೋಲಿಯ ಇದ್ದನ್ನು ನೋಡಬೇಕು, ಭೂಟಾನ್ನಿನ ನಿರ್ಮಲ್ ಹಸಿರಾದರೆ, ಮಂಗೋಲಿಯ ಉಗ್ರ ಕಂಧು ಬಣ್ಣ, ವನದೆವಿಯು ವನವಾಸಕ್ಕೆ ಹೋಗಿರುವಂತೆ ಬರಿದುಭೂಮಿ, ಕ್ರೂರ ಪ್ರದೇಶ. ಇದರ ಆಕರ್ಷಣವೇ ಬೇರೆ.

ಕಡೆಯದಾಗಿ, ಇನ್ಚಾ, ಮಾಯಾ, ಆಜೆಟೆಕ್ಕರ ತಾಯಿಮನೆಯಾದ ಸೌತ್ ಅಮೇರಿಕ.

ಇದರೊಂದಿಗೆ ಮದುವೆಯಾಗಿ ೨೦ ವರ್ಷಗಳಂತರ ಬಾನಲ್ಲೇ ಮಧುಚಂದ್ರಕ್ಕೆಎಂದು ಕರೆಯುವ ಪತಿದೇವ.

Wednesday, December 8, 2010

Kannada-- travel through sringeri.

 ಶೃಂಗೇರಿಗೆ ಚಿಕ್ಕಂದಿನಲ್ಲಿ ಹೋದ ನೆನಪು.


ಮುಜಾವ ಏಳು ಗಂಟೆಗೆ ಮನೆ ಬಿಟ್ಟ ನಾವು ಹಿರಿಯಡ್ಕ, ಪೆರದೂರು, ಶಿವಪುರ, ದಾಟಿ ಸೋಮೇಶ್ವರ ತಲುಪಿದೆವು, ಅಲ್ಲಿ ಹೊಟ್ಟೆಪೂಜೆ ಮುಗಿಸಿ ಮುಂದೆ ಮಲನಾದ ನಿಸರ್ಗ. ಆಗುಂಬೆ, ಶೃಂಗೇರಿ. ಪುಣ್ಯಕ್ಕೆ ಶ್ರೀನ್ಗೆರಿಯಿನ್ನು ಪ್ರವಾಸಿಗಳ ದಾಳಿ ಕಂಡಿಲ್ಲ. ದೇವಿದರ್ಶನಕ್ಕೆ ಹನುಮಂತನ ಬಾಲವಿಲ್ಲ ಗುರುದರ್ಶನಕ್ಕೆ ಟಿಕೆಟ್ ಬಂದಿಲ್ಲ.

ದೇವಿ ದರ್ಶನ ಪಡೆದು ಗುರುಗಳನ್ನು ಭೇಟಿಯಾಗಲು ಹೋದೆವು. ನಮ್ಮ ಮುಂದೆ ಇದ್ದ ಪ್ರತೀ ಒಬ್ಬರನ್ನು ಆದರದಿಂದ ಮಾತನಾಡಿಸಿ ಮನಸ್ಸಿಗೆ ಧೈರ್ಯ ನೀಡುತಿದ್ದರು ಗುರುಗಳು. ತಂದೆಯ ಬಳಿಗೆ ಹೋದ ಅದೇ ರಕ್ಷಾ ಕವಚದ ಅನುಭವ.

ಅಲ್ಲಿಂದ ಹಿಂತಿರುಗುವಾಗ ಕಂಡ ಅನ್ಜೀರದ ಮರ, ಬೇರಿಂದಲೂ ಅಂಗೀರ ಉದ್ಭವಿಸಿತ್ತು, ಪಾಠ ಶಾಲೆಯ ವಟುವರು ತಮ್ಮ ಅನುಭವಗಲಳನ್ನು ತಮ್ಮ ಕನಸುಗಲಳನ್ನು ನಮ್ಮೊಂದಿಗೆ ಹಂಚಿಕೊಂಡರು.

ಹರಿವನದಿಯಲ್ಲಿಯ ಮೀನು, ಮುಂಡಕ್ಕಿ ಎಸೆದರು ಅದರೆಡೆಗೆ ಬರುವುದ್ದಿಲ್ಲ, ಆದೇ ಬಿಸ್ಕೆಟ್ ಅಥವಾ ರಸ್ಕ್ ಎಸೆದರೆ ದಡೀರೆಂದು ಹಾಜೀರ್. ಕಿವಿ ಸುರಿದ ಮೀನಿನ ದರ್ಶರ್ನವೂ ಆಯಿತು.

ದೇವಿಯ ಪ್ರಸಾದ ಉಂಡು ಶೃಂಗೇರಿಯ ಪೇಟೆಯಲ್ಲಿ ಉಪ್ಪಿನkaaಯಿ ಇತ್ಯಾದಿಯ ವ್ಯಾಪಾರ ಮುಗಿಸಿ ಮರಳಿ ಮನೆಗೆ ಬಂದೆವು.