Showing posts with label sringeri. Show all posts
Showing posts with label sringeri. Show all posts

Saturday, January 1, 2011

kannadati

ಸಹ್ಯಾದ್ರಿಯ ಲೋಹದಲಿರ ಉತ್ತುಂಗದ ನಿಲುಕಿನಲ್ಲಿ,


ನಿತ್ಯ ಹರಿದ್ವರ್ಣ ವನದ ತೇಗ ಗಂಧ ತರುಗಳಲ್ಲಿ

ನಿತ್ಯೋತ್ಸವ ತಾಯೆ ನಿನಗೆ ನಿತ್ಯೋತ್ಸವ

ಇದು ನಿಸ್ಸಾರ್ ಅಹಮದರು ಕಂಡ ಕನ್ನಡ ತಾಯಿ. ಬಾರೋ ಸಾಧನ ಕೇರಿಗೆ, ಮರಳು ನಿನ್ನಿ ಊರಿಗೆ ಎಂದು ಬೇಂದ್ರೆ ಅಂದರು, ಈ ಭಾವನಾ ಜೀವಿಗಳಿಗೆ ಸ್ಫೂರ್ತಿ ನೀಡಿದ ಕನ್ನಡತಿ.

 ಹರಿವ ನದಿಯ ಕಳರವ ಸೀತಾ ನದಿಯ ತೀರದಲ್ಲಿ. ನನ್ನ ತಂದೆ ಹಾಗು ಅವರ ಅಣ್ಣ-ಅಕ್ಕಂದಿರ ಕ್ರೀಡಾಂಗಣ

 ತೆನೆ ಬಳಕು ಶಿವಪುರದ ಕೃಷಿಯಲ್ಲಿ

 ವಾನರ ಸೇನಾ ಓಲಗ ಸೋಮೇಶ್ವರದಲ್ಲಿ


 ಪಕ್ಷೀ ತೀರ್ಥ ಶೃಂಗೇರಿ

 ತುಂಗೆಯ ಮಡಿಲಲ್ಲಿ ಇಜುವ ಮೀನು




 ಮೀನನ್ನು ತಿನ್ನಿಸುವ ಭಕ್ತಾಧಿಗಳು, ಸಮಯದೊಂದಿಗೆ ಬದಲಾಗಿದೆ ಮೀನು ಮುಂಡಕ್ಕಿ ತಿನ್ನದೇ ರುಸ್ಕು ಅಥವಾ ಬಿಸ್ಕೆಟ್ಟು ತಿನ್ನಲು ಅಣಿ.
ಸಹ್ಯಾದ್ರಿಯ ಲೋಹದಲಿರ ಉತ್ತುಂಗದ ನಿಲುಕು.

ಬೈಯಲು ಸೀಮೆಯ ಗದ್ದೆ ಬಂಡಿಯೊಂದಿಗೆ

ಮಂಗಳವಾರದ ಪಶುಸಂತೆಗೆ ಹೋರಟ ರೈತ ಕುಟುಂಬ.
ಧಾರವಾಡ ನಗರಕ್ಕೆ ವಲಸೆ ಬಂದ ವಾನರರು

Monday, December 20, 2010

yellige honti sukumaari?

ಈ ರಜಾದಿನಗಳಲ್ಲಿ ಎಲ್ಲಿ ಹೋಗ ಬಯಸುವೆ ಎಂದು ಪ್ಲಿನ್ಕ್ಯ್ ಕೇಳುತ್ತಾಳೆ ತಾನೇ ಕರೆದು ಕೊಂಡು ಹೋಗುವಂತೆ :)


ನಾನೆನ್ನಲೀ?

"ಬಾಲ್ಯದ ಆಟ ಆ ಹುಡುಗಾಟ?"

ಅನ್ಯ್ವಿ, ನಾನು ಭೇಟಿಯಾಗಿ ಬಂದಿದ್ದು ನನ್ನ ಬಾಲ್ಯದ ನೆನೆಪು, ಹೆಬ್ರಿಯಿಂದ ಆಗುಂಬೆಗೆ ಹೋಗುವದಾರಿ ಹೆಚ್ಚು ಹೋಗದಿದ್ದರೂ ಅಪ್ಪನ ಬಾಲ್ಯ ಕಳೆದ ಊರಿದು ಸಮದ್ರತೀರವು ಮಲನಾಡನ್ನು ಸೇರುವ ಪ್ರದೇಶ ಇದರ ವಾತಾವರಣವೇ ವಿಚಿತ್ರ ಯಾಕೊಯೇನೋ ಆ ತಾಣ ಸರಿದೊಡನೆ ಅಪ್ಪನ ಬಾಲ್ಯದ ಕಥೆಗಳು, ಅತ್ತೆ ಜಯಲಕ್ಷ್ಮಿಯ ಸ್ವರದಲ್ಲಿ ಕೇಳಿಬರುತ್ತದೆ. ಶಿವಪುರ ಬಂದೊಡನೆ, ಅಜ್ಜಿಯ ಗೆಳತಿಯ ಮಗನಾದೆ ಕೃಷ್ಣಾ ಯೆಲ್ಲಿಕೊಡನ ಕರಾಮತ್ತಿನ ಕಥೆಗಳು, ಹರಿಯುವ ಸೀತಾನದಿ, ಅದ್ದನ್ನು ಚುಂಬಿಸುವಂತೆ ಬಾಗುವ ಮರಗಳು, ಅಕ್ಕಿಯ ಗದ್ದೆಗಳು ಇಲ್ಲಿಯ ಬತ್ತತೇನೆ ಚಿನ್ನದ ಬಣ್ಣ, ಕಾಳಿದಾಸನ ಶರದುವಧು ಇದ್ರಿನ್ದವೀ ಉದ್ಭವಿಸಿರಬೇಕು. ಅಜ್ಜಿ ಮನೆಗೆ ಬಂದ ಸಂತೋಷ ಹುರುಪು. ಕಡಲನ್ನು ಅಗಲಿ ಬಾಳು ಚಡಪಡಿಸುವ ನನಗೂ "ಯಾವ ಮಣ್ಣಿನ ಬ್ರಿಂದವನವು ಚಾಚಿತು ತನ್ನ ಮಣ್ಣಿನ ಕೈಯನೂ?" ಎಂದು ಕೇಳಬೇಕೆನ್ನಿಸುತದೆ. ನಾನೆಷ್ಟು ಪಟ್ಟಣದ ಬೇಡಗಿಯೆಂದು ಹೆಮ್ಮಪಟ್ಟರೂ ನನ್ನ ಸತ್ಯವಿದೆ ನಾನು ಪ್ರಕೃತಿಯ ಪುತ್ರಿ, ಅದರಿಂದ ದೂರ ಸಿಮೆಂಟು ಕಾಡಿನಲ್ಲಿ ನೀರಿನ ಹೊರಗೆ ಬಂದ ಮೀನಿನಂಥೆ ಚಡಪಡಿಸುವೆ. ನನ್ನ ಸಮತೋಲನಕ್ಕೆ ಕರಾವಳಿ-ಮಲನಾಡುಗಳ ಸಾಂತ್ವನ ಮುಖ್ಯ.

Wednesday, December 8, 2010

Kannada-- travel through sringeri.

 ಶೃಂಗೇರಿಗೆ ಚಿಕ್ಕಂದಿನಲ್ಲಿ ಹೋದ ನೆನಪು.


ಮುಜಾವ ಏಳು ಗಂಟೆಗೆ ಮನೆ ಬಿಟ್ಟ ನಾವು ಹಿರಿಯಡ್ಕ, ಪೆರದೂರು, ಶಿವಪುರ, ದಾಟಿ ಸೋಮೇಶ್ವರ ತಲುಪಿದೆವು, ಅಲ್ಲಿ ಹೊಟ್ಟೆಪೂಜೆ ಮುಗಿಸಿ ಮುಂದೆ ಮಲನಾದ ನಿಸರ್ಗ. ಆಗುಂಬೆ, ಶೃಂಗೇರಿ. ಪುಣ್ಯಕ್ಕೆ ಶ್ರೀನ್ಗೆರಿಯಿನ್ನು ಪ್ರವಾಸಿಗಳ ದಾಳಿ ಕಂಡಿಲ್ಲ. ದೇವಿದರ್ಶನಕ್ಕೆ ಹನುಮಂತನ ಬಾಲವಿಲ್ಲ ಗುರುದರ್ಶನಕ್ಕೆ ಟಿಕೆಟ್ ಬಂದಿಲ್ಲ.

ದೇವಿ ದರ್ಶನ ಪಡೆದು ಗುರುಗಳನ್ನು ಭೇಟಿಯಾಗಲು ಹೋದೆವು. ನಮ್ಮ ಮುಂದೆ ಇದ್ದ ಪ್ರತೀ ಒಬ್ಬರನ್ನು ಆದರದಿಂದ ಮಾತನಾಡಿಸಿ ಮನಸ್ಸಿಗೆ ಧೈರ್ಯ ನೀಡುತಿದ್ದರು ಗುರುಗಳು. ತಂದೆಯ ಬಳಿಗೆ ಹೋದ ಅದೇ ರಕ್ಷಾ ಕವಚದ ಅನುಭವ.

ಅಲ್ಲಿಂದ ಹಿಂತಿರುಗುವಾಗ ಕಂಡ ಅನ್ಜೀರದ ಮರ, ಬೇರಿಂದಲೂ ಅಂಗೀರ ಉದ್ಭವಿಸಿತ್ತು, ಪಾಠ ಶಾಲೆಯ ವಟುವರು ತಮ್ಮ ಅನುಭವಗಲಳನ್ನು ತಮ್ಮ ಕನಸುಗಲಳನ್ನು ನಮ್ಮೊಂದಿಗೆ ಹಂಚಿಕೊಂಡರು.

ಹರಿವನದಿಯಲ್ಲಿಯ ಮೀನು, ಮುಂಡಕ್ಕಿ ಎಸೆದರು ಅದರೆಡೆಗೆ ಬರುವುದ್ದಿಲ್ಲ, ಆದೇ ಬಿಸ್ಕೆಟ್ ಅಥವಾ ರಸ್ಕ್ ಎಸೆದರೆ ದಡೀರೆಂದು ಹಾಜೀರ್. ಕಿವಿ ಸುರಿದ ಮೀನಿನ ದರ್ಶರ್ನವೂ ಆಯಿತು.

ದೇವಿಯ ಪ್ರಸಾದ ಉಂಡು ಶೃಂಗೇರಿಯ ಪೇಟೆಯಲ್ಲಿ ಉಪ್ಪಿನkaaಯಿ ಇತ್ಯಾದಿಯ ವ್ಯಾಪಾರ ಮುಗಿಸಿ ಮರಳಿ ಮನೆಗೆ ಬಂದೆವು.