Monday, December 20, 2010

yellige honti sukumaari?

ಈ ರಜಾದಿನಗಳಲ್ಲಿ ಎಲ್ಲಿ ಹೋಗ ಬಯಸುವೆ ಎಂದು ಪ್ಲಿನ್ಕ್ಯ್ ಕೇಳುತ್ತಾಳೆ ತಾನೇ ಕರೆದು ಕೊಂಡು ಹೋಗುವಂತೆ :)


ನಾನೆನ್ನಲೀ?

"ಬಾಲ್ಯದ ಆಟ ಆ ಹುಡುಗಾಟ?"

ಅನ್ಯ್ವಿ, ನಾನು ಭೇಟಿಯಾಗಿ ಬಂದಿದ್ದು ನನ್ನ ಬಾಲ್ಯದ ನೆನೆಪು, ಹೆಬ್ರಿಯಿಂದ ಆಗುಂಬೆಗೆ ಹೋಗುವದಾರಿ ಹೆಚ್ಚು ಹೋಗದಿದ್ದರೂ ಅಪ್ಪನ ಬಾಲ್ಯ ಕಳೆದ ಊರಿದು ಸಮದ್ರತೀರವು ಮಲನಾಡನ್ನು ಸೇರುವ ಪ್ರದೇಶ ಇದರ ವಾತಾವರಣವೇ ವಿಚಿತ್ರ ಯಾಕೊಯೇನೋ ಆ ತಾಣ ಸರಿದೊಡನೆ ಅಪ್ಪನ ಬಾಲ್ಯದ ಕಥೆಗಳು, ಅತ್ತೆ ಜಯಲಕ್ಷ್ಮಿಯ ಸ್ವರದಲ್ಲಿ ಕೇಳಿಬರುತ್ತದೆ. ಶಿವಪುರ ಬಂದೊಡನೆ, ಅಜ್ಜಿಯ ಗೆಳತಿಯ ಮಗನಾದೆ ಕೃಷ್ಣಾ ಯೆಲ್ಲಿಕೊಡನ ಕರಾಮತ್ತಿನ ಕಥೆಗಳು, ಹರಿಯುವ ಸೀತಾನದಿ, ಅದ್ದನ್ನು ಚುಂಬಿಸುವಂತೆ ಬಾಗುವ ಮರಗಳು, ಅಕ್ಕಿಯ ಗದ್ದೆಗಳು ಇಲ್ಲಿಯ ಬತ್ತತೇನೆ ಚಿನ್ನದ ಬಣ್ಣ, ಕಾಳಿದಾಸನ ಶರದುವಧು ಇದ್ರಿನ್ದವೀ ಉದ್ಭವಿಸಿರಬೇಕು. ಅಜ್ಜಿ ಮನೆಗೆ ಬಂದ ಸಂತೋಷ ಹುರುಪು. ಕಡಲನ್ನು ಅಗಲಿ ಬಾಳು ಚಡಪಡಿಸುವ ನನಗೂ "ಯಾವ ಮಣ್ಣಿನ ಬ್ರಿಂದವನವು ಚಾಚಿತು ತನ್ನ ಮಣ್ಣಿನ ಕೈಯನೂ?" ಎಂದು ಕೇಳಬೇಕೆನ್ನಿಸುತದೆ. ನಾನೆಷ್ಟು ಪಟ್ಟಣದ ಬೇಡಗಿಯೆಂದು ಹೆಮ್ಮಪಟ್ಟರೂ ನನ್ನ ಸತ್ಯವಿದೆ ನಾನು ಪ್ರಕೃತಿಯ ಪುತ್ರಿ, ಅದರಿಂದ ದೂರ ಸಿಮೆಂಟು ಕಾಡಿನಲ್ಲಿ ನೀರಿನ ಹೊರಗೆ ಬಂದ ಮೀನಿನಂಥೆ ಚಡಪಡಿಸುವೆ. ನನ್ನ ಸಮತೋಲನಕ್ಕೆ ಕರಾವಳಿ-ಮಲನಾಡುಗಳ ಸಾಂತ್ವನ ಮುಖ್ಯ.

No comments:

Post a Comment