Tuesday, December 7, 2010

shravana sukha

ವಾಟ್ ಇಸ್ ಯುವರ್ ಫಾವೊರಿತೆ ಸೌಂಡ್ ಅಂಡ್ ವೈ?


ಈ ಪ್ಲಿನ್ಕ್ಯ್ಗೆ ಯಾರು ಪ್ರಶ್ನೆ ಸೂಚಿಸುತ್ತಾರೋ?

ನನ್ನಂಥಃ ನಿಶಬ್ಧ ಪ್ರಿಯಳು ಏನೆಂದು ಬರೆಯಬೇಕು? ನನಗೋ ಮನೆಯ ನಿತ್ಯಶಬ್ದಗಳೇ ಪ್ರಿಯ.

ಅಪ್ಪ ಕಾಗದ ಕೆಲಸ ಮಾಡುವಾಗ ಹಾಡುತಿದ್ದ ಕುರುಡು ಸುಬ್ಬಿ ಬಂದಳು ಇಲ್ಲಾ ಎಣ್ಣೆಸ್ನಾನಕ್ಕೆ ಹೋಗುವಾಗ ಬಚ್ಕಾಲುಗೀತೆಯಾಗುತಿದ್ದ ನಾನೊಂದು ಮದುವೆಯ ಮಾಡಿಕೊಂಡೆ . ಮರೆಯಲು ಅಸಾಧ್ಯ.

ಅಮ್ಮ ಯಾವಾಗಲು ಅಡಿಗೆಮನೆಯಲ್ಲಿ ಹಾಕುವ ಪ್ರಮಾಣಗಳ ಮಟಮಟಾ-- ಅಂದ್ರೆ ಉಟಕ್ಕೆ ಇಷ್ಟು ಜನ, ಹಾಗಾದರೆ ಇಷ್ಟು ಅಕ್ಕಿ ಹೀಗೆ ಅಡುಗೆ ಮುಗಿಯುವವರೆಗೆ ಲೆಕ್ಕ ನಡೆಯುತಿರುತದೆ. ಅಮ್ಮಮ್ಮ ನನ್ನ ಅಜ್ಜಿ ಪಾರ್ವತಿ. "ಕ್ಯಾ ಗಜ್ಯಬ್ ಕೆ ಜಲ್ವೆ ತೆರೆ ಪಾರೋ " ಅಡಿಗೆಯ ಮನ್ನೆಯಲ್ಲಿ ಶೇಷುಡು ಶಿವುನಿಕೂ ಭೂಶುಡು" ಎಂದು ಹಾಡಿದರೆ ಬಟ್ಟೆvaಣಗಿಸುವಾಗ "ಶ್ಯಾಮ ಸುಂದರ ಸೋದರಿ " ಇಲ್ಲಾ "ರಾಮ ಭಕ್ತಿ ಸಾಮ್ರಾಜ್ಯ ಮೂ " ಯಾವುದಾದರು ಕೃತಿ ಸ್ಮರಿಸುತಿರುವರು. ಪೇಪರ್ ಓದಿಮುಗಿದಮೇಲೆ "ಎಂದರೂ ಮಹಾನುಭಾವುಲು " ನಾವು ಸಾಗುತಿರುವ ದಾರಿ ಸರಿಯಲ್ಲ ವೆಂದು ಸೂಕ್ಷ್ಮವಾಗಿ ತಿಳಿಸಲು "ಮಾಕೆಲರ ವಿಚಾರಮೋ ಮರುಗನ್ನ ಶ್ರೀ ರಾಮಚಂದ್ರ.." ಎಂದು ಉಸಿರಿನಡಿ ಹಾದಲಾರಮ್ಬಿಸುತ್ತಿದ್ದರು.

ಮದುವೆಯಾಗಿ ಇಪತ್ತು ವರ್ಷಗಳ ಅನುಭವ ಪತಿದೇವರು "ಭಾಸ್ಕರ ಹೇ ಗಗನ ರಾಜ " ಎಂದು ಮೈಕಾಸುರನಿಗೆ (ಮೈಕ್ ಅಸುರ ) ಸಾವಾಲು ಎಸೆದರೆ "ಆಲ್ ಇಜ್ ವೆಲ್! "

ಆದರೆ ಅತಿ ಮದುರವಾದ ಶಬ್ದಗಳೆಂದರೆ,ದೊಡ್ಡಮ್ಮ ಜಾನಕಿ ತನ್ನ ಮಮ್ಮಕ್ಕಳೊಂದಿಗೆ ಅವಧಾನ ನಡೆಸುತ್ತಿದ್ದು.

ಇದರ ಬಗ್ಗೆ ಓದಲು ಲಾಗ್ ಆನ್ ಮಾಡಿ ಏನ್.ಅರ.ಕೆ.ಬ್ಲಾಗ್ಸ್ಪಾಟ್.ಕಂ

No comments:

Post a Comment