ನಿಜ ಹೇಳಲು ನಾನು ಶಂಕರ್ನಾಗ್ ಫ್ಯಾನ್, ಆದರು ನನ್ನ ನನಪಿನ ದೋಣಿಯಲ್ಲಿ ಉಳಿದ ಚಿತ್ರವೆಂದರೆ "ಬಹಾದುರ್ ಗಂಡು"
ಆಗ ನಾನು ಐದನೇ ತರಗತಿ, ತಮ್ಮ ಶಾಂತರಾಮ ಮೂರನೆಯ ತರಗತಿ, ನಮ್ಮ ತಂದೆಗೋ ಆಸ್ಪತ್ರೆಯಿಂದ ಹೊತ್ತಿಗೆ ಉಟಕ್ಕೆ ಬಂದದಿನ ಹಬ್ಬ. ಆದರೂ ನಮ್ಮ ಪರೀಕ್ಷೆ ಮುಗಿದ ಮರುದಿನ ನಮ್ಮನ್ನು ಅಂದರೆ, ಶಾಂತರಾಮ್ ನಾನು ಪಪ್ಪಾ ಅಮ್ಮನಿಲ್ಲದೆ ಸಿನೆಮಾ ನೋಡಲು ಹೋಗುತಿತ್ತು ಮಣಿಪಾಲದಿಂದ ಉಡುಪಿ, ಅಲ್ಲಿಂದ ಮಂಗಳೂರು ಅಲ್ಲಿ ಗಣೇಶ ಭವನದಲ್ಲಿ ಮಸಾಲದೋಸೆ ಯಾವುದೋ ಪುಸ್ತಕಬಂದರ ಈಗ ಹೆಸರೂ ನನಪಿಲ್ಲ ಇಬ್ಬರಿಗೂ ಒನ್ನೊಂದು ಅಮರಚಿತ್ರ ಕಥೆ, ಮತ್ತೆ ಸಿನಿಮಾ ಪಾಪ ಕರೆದುಕೊಂಡು ಹೋಗುವ ಸಂಬ್ರಮದಲ್ಲಿ ಯಾವ ಸಿನೆಮಕ್ಕು ನಾವು ರೆಡಿ. ಹತ್ತಿರದ ಜ್ಯೋತಿ ತಲ್ಕೀಸ್-ಅಲ್ಲಿ ಇದ್ದ ಚಿತ್ರ ಬಹಾದುರ್ ಗಂಡು,ತಮ್ಮನಿಗೋ ರಾಜಕುಮಾರ ಹೀರೋ, ಸೊ ನಾವು ಬಹಾದುರ್ ಗಂಡು ನೋಡಿತು, ಮತ್ತೆ ಹೊಟ್ಟೆಪೂಜೆ ವೇಳೆ. ಕೋಮಲ್'ಸ ಕಟ್ಲೆಟ್ ಚಾಕಲೇಟ್ ಐಸ್ಕ್ರೀಂ ಔತಣ. ಮತ್ತೆ ಮರುಳಿ ಮನೆಗೆ, ಬರುವ ದಾರಿಯುದ್ದಕ್ಕೂ ತಮ್ಮನ ಬಹಾದುರ್ ಗಂಡು ಗುಣಗಾನ, ಇಂದಿನವರೆಗೂ ಉಳಿದ ನನಪುಗಳು, ಈ ಸ್ಮ್ರಿತಿಯು ಅಮಾಯಕ ಬಾಲ್ಯದ್ದೋ, ಅಪರುಪಕ್ಕ ಅಪ್ಪನ ಸಹವಾಸವೋ ಅರಿಯೆ, ಆದರೂ ಸ್ಮರಣಿಯ ಸಿನಿಮಾ ಅಂದರೆ ಬಹಾದುರ್ ಗಂಡು.
No comments:
Post a Comment