Thursday, December 23, 2010

noodiswami naavirode heege.

ಯಾರಿಗೆ ಸಲ್ಲಬೇಕಾದ ಗೌರವ ನೀವು ಕೊಡುತ್ತ ಇಲ್ಲ ಎಂದು ವಿಚಾರ ಮಾಡಿಸುತಿರುವಳು ಪ್ಲಿನ್ಕ್ಯ್.


ವಿಚಾರ ಮಾಡಿದರೆ, ಜಮ್ಮಧರಿನಿಯರೆನ್ನ ಬಹುದು.

ನಮ್ಮ ಸೌಚಾಲಯ, ರಸ್ತೆಗಳನ್ನು ಸ್ವಚೀಕರಿಸಲು ಬರುತಾರೆ ಇವರಲ್ಲಿ ಹೆಚ್ಚಿನವರು ವಸಲೇ ಬಂದವರು, ಕೆಲಸ ಕೊಡಿಸುವ ದಲಾಲರಿಂದ ಇವರಿಗೆ ಕೆಲಸ ದೊರೆಯುವುದು. ದಾಲಾಲರು ಇವರಿಗೆ ಬರುವ ಸಂಬಳದಿಂದ ತಮ್ಮ ಪಾಲು ವಸೂಲಿ ಮಾಡುತ್ತಾರೆ, ಇನ್ನು ದಿನ್ನಕ್ಕೆ ೮ ಗಂಟೆ ಕೆಲಸ ಮಾಡಬೇಕು, ನಮ್ಮ ಹೊಲಸೇ ನಾವು ತೆಗೆಯಲು ಹೆಸುವಾಗ ಇವರಿಗಾಗುವುದು ಸಹಜವಲ್ಲವೇ?

ಕಸವನ್ನು ಬುಟ್ಟಿಗೆ ಎಸೆಯುವ ಸಂಸ್ಕಾರ ನಮಗಿಲ್ಲ.

ಆಗೊಮ್ಮೆ ಈಗೂಮ್ಮೆ ತಂಗಳು, ಹಳೆ ಬಟ್ಟೆ ಅಥವಾ ದೀಪಾವಳಿಯ ಕೊಡುಗುಗೆ ಕೊಟ್ಟು ಇವರನ್ನು ಉದ್ಧಾರ ಮಾಡುತ್ತೇವೆ. ಕೆಲಸ ಕಳ್ಳರೆಂಬ ಬೇರುದು ಬೇರೆ, ವೃತ್ತಿ ಕಳ್ಳರಿರಬಹುದೆಂಬ ಸಂಶಯದ ದೃಷ್ಟಿಗಳು ಇವಲ್ಲ ಇವರ occupational hazard

ನೋಡಿ ಸ್ವಾಮಿ ನಾವಿರೋದೆ ಹೀಗೆ.

Wednesday, December 22, 2010

tirugaalu thippi

ಪ್ಲಿನ್ಕ್ಯ್ ಇಂದು ಯಾತ್ರೆಗಳ ಸಲಹಗಾರತಿಯಾಗಿರುವಳು.


ನನ್ನೆಲ್ಲಿ ಹೋಗಬಯಸುವೆ? ಕಳೆದಸಾರಿ ಬಾಲ್ಯ ಅಂದಿದಕ್ಕೆ, ಈಗ ಸ್ಪೆಸಿಫಿಕ್ಕಾಗಿ ಯಾವೂರು ಎಂದು ಕೇಳಿರುವಳು ಆದೂ multiple choice ಉತ್ತರ ಬರೆದು ಬರೆದು ಮೂರು ಊರುಗಲ್ಳನ್ನು ಆರಿಸಿಯಂದಿರುವಳು

ಭೂಟನ್ ಹಿಮಾಲಯದ ಮಡಿಲ ಪರ್ವತ ಶ್ರೇಣಿ ಹಸಿರು ಉಸಿರ ನಾಡು, ವಾಯು ಸಮುದ್ರರ ಆರ್ಭಟದಿಂದ ಬೇರೆಯೇ ಹಾಡು ಹಾಡುತ್ತದೆ ಶೀತಲ ಮಲಯ ಮಾರುತದ ಅನುಭವ ಉಷ್ಣ ಸಮುದ್ರಗಾಲಿಯೆಂದ ಬೇರೆ. ವಿಹಾರ, ಲಾಮ, ಇವರ ಲೋಕವನ್ನನುಭಾವಿಸುವ ಕನಸು.

ಅಲ್ಲಿಂದ ಚಂಗಿಜ್ ಖಾನನ ಮಂಗೋಲಿಯ ಇದ್ದನ್ನು ನೋಡಬೇಕು, ಭೂಟಾನ್ನಿನ ನಿರ್ಮಲ್ ಹಸಿರಾದರೆ, ಮಂಗೋಲಿಯ ಉಗ್ರ ಕಂಧು ಬಣ್ಣ, ವನದೆವಿಯು ವನವಾಸಕ್ಕೆ ಹೋಗಿರುವಂತೆ ಬರಿದುಭೂಮಿ, ಕ್ರೂರ ಪ್ರದೇಶ. ಇದರ ಆಕರ್ಷಣವೇ ಬೇರೆ.

ಕಡೆಯದಾಗಿ, ಇನ್ಚಾ, ಮಾಯಾ, ಆಜೆಟೆಕ್ಕರ ತಾಯಿಮನೆಯಾದ ಸೌತ್ ಅಮೇರಿಕ.

ಇದರೊಂದಿಗೆ ಮದುವೆಯಾಗಿ ೨೦ ವರ್ಷಗಳಂತರ ಬಾನಲ್ಲೇ ಮಧುಚಂದ್ರಕ್ಕೆಎಂದು ಕರೆಯುವ ಪತಿದೇವ.

Monday, December 20, 2010

yellige honti sukumaari?

ಈ ರಜಾದಿನಗಳಲ್ಲಿ ಎಲ್ಲಿ ಹೋಗ ಬಯಸುವೆ ಎಂದು ಪ್ಲಿನ್ಕ್ಯ್ ಕೇಳುತ್ತಾಳೆ ತಾನೇ ಕರೆದು ಕೊಂಡು ಹೋಗುವಂತೆ :)


ನಾನೆನ್ನಲೀ?

"ಬಾಲ್ಯದ ಆಟ ಆ ಹುಡುಗಾಟ?"

ಅನ್ಯ್ವಿ, ನಾನು ಭೇಟಿಯಾಗಿ ಬಂದಿದ್ದು ನನ್ನ ಬಾಲ್ಯದ ನೆನೆಪು, ಹೆಬ್ರಿಯಿಂದ ಆಗುಂಬೆಗೆ ಹೋಗುವದಾರಿ ಹೆಚ್ಚು ಹೋಗದಿದ್ದರೂ ಅಪ್ಪನ ಬಾಲ್ಯ ಕಳೆದ ಊರಿದು ಸಮದ್ರತೀರವು ಮಲನಾಡನ್ನು ಸೇರುವ ಪ್ರದೇಶ ಇದರ ವಾತಾವರಣವೇ ವಿಚಿತ್ರ ಯಾಕೊಯೇನೋ ಆ ತಾಣ ಸರಿದೊಡನೆ ಅಪ್ಪನ ಬಾಲ್ಯದ ಕಥೆಗಳು, ಅತ್ತೆ ಜಯಲಕ್ಷ್ಮಿಯ ಸ್ವರದಲ್ಲಿ ಕೇಳಿಬರುತ್ತದೆ. ಶಿವಪುರ ಬಂದೊಡನೆ, ಅಜ್ಜಿಯ ಗೆಳತಿಯ ಮಗನಾದೆ ಕೃಷ್ಣಾ ಯೆಲ್ಲಿಕೊಡನ ಕರಾಮತ್ತಿನ ಕಥೆಗಳು, ಹರಿಯುವ ಸೀತಾನದಿ, ಅದ್ದನ್ನು ಚುಂಬಿಸುವಂತೆ ಬಾಗುವ ಮರಗಳು, ಅಕ್ಕಿಯ ಗದ್ದೆಗಳು ಇಲ್ಲಿಯ ಬತ್ತತೇನೆ ಚಿನ್ನದ ಬಣ್ಣ, ಕಾಳಿದಾಸನ ಶರದುವಧು ಇದ್ರಿನ್ದವೀ ಉದ್ಭವಿಸಿರಬೇಕು. ಅಜ್ಜಿ ಮನೆಗೆ ಬಂದ ಸಂತೋಷ ಹುರುಪು. ಕಡಲನ್ನು ಅಗಲಿ ಬಾಳು ಚಡಪಡಿಸುವ ನನಗೂ "ಯಾವ ಮಣ್ಣಿನ ಬ್ರಿಂದವನವು ಚಾಚಿತು ತನ್ನ ಮಣ್ಣಿನ ಕೈಯನೂ?" ಎಂದು ಕೇಳಬೇಕೆನ್ನಿಸುತದೆ. ನಾನೆಷ್ಟು ಪಟ್ಟಣದ ಬೇಡಗಿಯೆಂದು ಹೆಮ್ಮಪಟ್ಟರೂ ನನ್ನ ಸತ್ಯವಿದೆ ನಾನು ಪ್ರಕೃತಿಯ ಪುತ್ರಿ, ಅದರಿಂದ ದೂರ ಸಿಮೆಂಟು ಕಾಡಿನಲ್ಲಿ ನೀರಿನ ಹೊರಗೆ ಬಂದ ಮೀನಿನಂಥೆ ಚಡಪಡಿಸುವೆ. ನನ್ನ ಸಮತೋಲನಕ್ಕೆ ಕರಾವಳಿ-ಮಲನಾಡುಗಳ ಸಾಂತ್ವನ ಮುಖ್ಯ.

Sunday, December 19, 2010

nannolavina sunday

ಕನ್ನಡಕ್ಕೆ ಅನುವಾದ:


ನನ್ನಾಸೆಯ ಸಂಡೇ ಬಗ್ಗೆ ಕೇಳುತ್ತಾಳೆ ಪ್ಲಿನ್ಕ್ಯ್,

ನಾನೇನನು ನುಡಿಯಲಿ ನಲ್ಲ ಹೇಳೆಯಾ?

ಮುಂಜಾನೆ ಸೂರ್ಯನ ಪ್ರಥಮಕಿರಣ ಅಲಾರ್ಮ್ ಗಡಿಯಾರ ವಾದರೆ? ಸ್ವಚ್ಛ ಮನೆಯಲ್ಲಿ, ಬಿಸಿಸ್ಕಾಪಿ ಕೈಗೆ ತಂದುಕೊದುವವರು ಬೇಕು. ಅಲ್ಲವೆ,ಆಮೇಲೆ ಪುಸ್ತಕ ಓದುಕೊಂಡು, ಕಾಲುಚಾಚುಕೊಂಡಿರಬೇಕು, ಮಧ್ಯಾನ್ಹದ ಅಡುಗೇನೂ ಇಲ್ಲ ಊಟನೂ ಬೇಡ ಮೂರ್ಗಂಟೆ ಸುಮಾರು ಕಾಪಿಕುಡಿದು ತಿರುಗಾಡಿ ಬರಬೇಕು, ಮನೆ ಸ್ವಚ್ಛವಿರುವುದು, ಸಾಮಾನು ಸ್ತಳಧಲ್ಲೇ ಇರುವುದು, ಬಟ್ಟೆ ತನ್ನ ತಾನು ಒಗೆದುಕೊಳ್ಳುವುದು, ಇಸ್ತ್ರಿಯ ರಂಪವಿಲ್ಲ, ರಾತ್ರಿ ಟೊಮೇಟೊ ಸೌಪ್ ಫ್ರೆಂಚ್ ಫ್ರೈಯೊಂದಿಗೆ ಸ್ಪಾನಿಶ್ ಚಾಕಲೇಟ್ ಕುಡಿದು ಮಧುರ ಸಂಗೀತಕೆಳುತ್ತಾ ನಿಧಾನವಾಗಿ ನಿದ್ರಾದೇವಿಯ ಮಡಿ ಸೇರುವುದು, ಒಳ್ಳೆ ಕಾರ್ಯಕ್ರಮವಲ್ಲವ್ವೆ?

ಈ ಹಗಲು ಕನಸು ನನ್ನೆಸಾಗುವರೆಗೂ..

ಆದಿತ್ಯವಾರವೆಂದರೆ ಅಗಸನಾಗು, ಸಂತೆಹೂಗು ತರಕಾರಿತಾ, ಕಿರಾಣಿತಾ, ಬೆಳಗ್ಗೆ ತಿಂಡಿ ಸ್ವಚ್ಛ ಮಾದ್ರೊಳಗೆ ಊಟಕ್ಕೂ ತಯಾರು ಮಾಡು, ಮನೆ ಸರಿಮಾಡಲು ಸಿಗುವುದು ಒಂದೇ ದಿನ, ಬಚ್ಚಲು ಸೇವೆ ಬೇರೆಆಗಬೇಕು ಇವೆಲ್ಲರ ಮಧ್ಯೆ ಸಮಯ ಸಿಕ್ಕಿದರೆ ಒಂದು ಪಾನಿಪೂರಿ ಹೊಡೆದು ಬರೋಣ.

Saturday, December 18, 2010

nagumogada cheluve

ನನ್ನ ನಗುವಿನ ನಿನಾದವೇನ್ನೆಂದು ಕೆಳುವೆಯೋ ಪ್ಲಿನ್ಕ್ಯ್,
ನಗುವುದು ಸಹಜದ ಧರ್ಮ ನಗಿಸುವುದು ಪರಧರ್ಮ,ನಗುವ ಕೇಳುತ ನಗುವುದತಿಷಯದ ಧರ್ಮ  ನಗುತನಗಿಸುತ ನಕ್ಕು ನಲಿಯುತ ಬಾಳೇ ನನ್ನಮ್ಮ ಪ್ಲಿನ್ಕಿಯಮ್ಮ :) ಅಲ್ವಾ ಮತ್ತೆ?
೪೫ ವರ್ಷಕ್ಕೆ ಏನೆನ್ನಲಿ? ನಡೆಗಿಂಥ ನುಡಿಚೆನ್ನ ನುಡಿಗಿಂಥ ನಗುಚೇನ್ನ ಅನ್ನಬೇಕೆ ಹೊರತು, ನಡುಗಿಂಥ ನಗುಚೇನ್ನ ಅನ್ನಲಂತ್ಹೂ ಸಾಧ್ಯವೇ ಇಲ್ಲ. :) 
ಆದರೂ ಪರಮಾತ್ಮನ ದಯೆಯಿಂದ, ಐಶ್ವರ್ಯಳಂತೆ ಒಳ್ಳೆ ರಕ್ಕಸಿ ನಗುವಿಲ್ಲ, ಎಲ್ಲಾದರೆ ನಕ್ಕರೆ, ಕಣ್ಣಲ್ಲಿ ನೀರಿಳಿಯುವವರೆಗೂ ನಗಬಲ್ಲೆ ಇಲ್ಲಾಂದ್ರೆ ಕಿರುನಗೆಯೇ ನನ್ನ ಶೃಂಗಾರ. 

Thursday, December 16, 2010

killer instinct

ಕರ್ಮದ ಫಲ ಅನುಭವಿಸುವ ಭಯವಿಲ್ಲಡಿದರೆ ನೀವು ಯಾವ ಕ್ರೂರ ಕೆಲಸ ಮಾಡುತಿದ್ದಿರೆಂದು ಪ್ಲಿನ್ಕ್ಯ್ ಕೇಳಿದಳು,
ಇದೂ ಕೇಳುವ ವಿಷಯವಾ? ಒಂದು ಎಲ್ಲ ರಾಜಕಾರಣಿಯರನ್ನು ತೋಪಿನಿದ ಹಾರಿಸಿಬಿದುತ್ತಿದ್ದೆ. ಅದರಲ್ಲೂ ನೆಹರು ಪರಿವಾರದ ಸಧಸ್ಯರನ್ನು ಕಂಡಿತವಾಗಿ. ಆದರೆ ಫಲ ಅನುಭವಿಸಲೀ ಬೇಕು, ಹಾಗಾಗಿ ನಾನು ಮುಂಗೆರಿಲಾಲ್ನಂಥೆ ಕನಸು ಕಾಣುತಿರುವೇ 

If there were no consequences of whats, the most evil thing I would do.
Does one need to ask? Line up all the politicians, the Sonias, Priyankas and Rahul and shoot them dead. But  unfortunately consequences do exists so I restrict myself to performing this act like Mungerilal does—in my dream.

Thursday, December 9, 2010

akkana mantra

ಪ್ಲಿನ್ಕ್ಯ್ ನಮಗೆ ಕೊಟ್ಟಿರುವ ಅತಿ ವಿಚಿತ್ರ ಸಲಹೆ ಬಗ್ಗೆ ಕೇಳಿದ್ದಾಳೆ.


ನಾನೋ ನನ್ನದೆ ಲೋಕದಲ್ಲಿರುವುದರಿಂದ ಬಲಕೈಗೆ ಎಡಕೈ ಮಾಡೋ ಕೆಲಸ ತಿಳಿದಿಲ್ಲ, ದಿನಬೆಳಗಾದರೆ ಇದೆಲ್ಲಿಯಿಟ್ಟೆ ಅದೆಲ್ಲಿಯಿಟ್ಟೆ ಎಂದು ಹುಡುಕಾಟ. ಭಾವನವರಿಗೆ ದೂರವಾಣಿ, ಅವರು ಲೆಕ್ಕಹಾಕಿ ಇಲ್ಲಿ ಯೆಲ್ಲಿರಬಹುದೆಂದು ಸೂಚಿಸುತಿದ್ದರು. ನನ್ನ ದಿನದ ಗೊಳುನೋಡಿ ಅಕ್ಕ ಒಂದು ಕಿರು ಮಂತ್ರ ಉಪದೇಷಿಸಿದಳು ಅಂದಿಂದ ಇಂದಿನವರೆಗೂ ನನ್ನ ಬೆಂಬಲವಾಗಿದೆ. :)

Wednesday, December 8, 2010

Kannada-- travel through sringeri.

 ಶೃಂಗೇರಿಗೆ ಚಿಕ್ಕಂದಿನಲ್ಲಿ ಹೋದ ನೆನಪು.


ಮುಜಾವ ಏಳು ಗಂಟೆಗೆ ಮನೆ ಬಿಟ್ಟ ನಾವು ಹಿರಿಯಡ್ಕ, ಪೆರದೂರು, ಶಿವಪುರ, ದಾಟಿ ಸೋಮೇಶ್ವರ ತಲುಪಿದೆವು, ಅಲ್ಲಿ ಹೊಟ್ಟೆಪೂಜೆ ಮುಗಿಸಿ ಮುಂದೆ ಮಲನಾದ ನಿಸರ್ಗ. ಆಗುಂಬೆ, ಶೃಂಗೇರಿ. ಪುಣ್ಯಕ್ಕೆ ಶ್ರೀನ್ಗೆರಿಯಿನ್ನು ಪ್ರವಾಸಿಗಳ ದಾಳಿ ಕಂಡಿಲ್ಲ. ದೇವಿದರ್ಶನಕ್ಕೆ ಹನುಮಂತನ ಬಾಲವಿಲ್ಲ ಗುರುದರ್ಶನಕ್ಕೆ ಟಿಕೆಟ್ ಬಂದಿಲ್ಲ.

ದೇವಿ ದರ್ಶನ ಪಡೆದು ಗುರುಗಳನ್ನು ಭೇಟಿಯಾಗಲು ಹೋದೆವು. ನಮ್ಮ ಮುಂದೆ ಇದ್ದ ಪ್ರತೀ ಒಬ್ಬರನ್ನು ಆದರದಿಂದ ಮಾತನಾಡಿಸಿ ಮನಸ್ಸಿಗೆ ಧೈರ್ಯ ನೀಡುತಿದ್ದರು ಗುರುಗಳು. ತಂದೆಯ ಬಳಿಗೆ ಹೋದ ಅದೇ ರಕ್ಷಾ ಕವಚದ ಅನುಭವ.

ಅಲ್ಲಿಂದ ಹಿಂತಿರುಗುವಾಗ ಕಂಡ ಅನ್ಜೀರದ ಮರ, ಬೇರಿಂದಲೂ ಅಂಗೀರ ಉದ್ಭವಿಸಿತ್ತು, ಪಾಠ ಶಾಲೆಯ ವಟುವರು ತಮ್ಮ ಅನುಭವಗಲಳನ್ನು ತಮ್ಮ ಕನಸುಗಲಳನ್ನು ನಮ್ಮೊಂದಿಗೆ ಹಂಚಿಕೊಂಡರು.

ಹರಿವನದಿಯಲ್ಲಿಯ ಮೀನು, ಮುಂಡಕ್ಕಿ ಎಸೆದರು ಅದರೆಡೆಗೆ ಬರುವುದ್ದಿಲ್ಲ, ಆದೇ ಬಿಸ್ಕೆಟ್ ಅಥವಾ ರಸ್ಕ್ ಎಸೆದರೆ ದಡೀರೆಂದು ಹಾಜೀರ್. ಕಿವಿ ಸುರಿದ ಮೀನಿನ ದರ್ಶರ್ನವೂ ಆಯಿತು.

ದೇವಿಯ ಪ್ರಸಾದ ಉಂಡು ಶೃಂಗೇರಿಯ ಪೇಟೆಯಲ್ಲಿ ಉಪ್ಪಿನkaaಯಿ ಇತ್ಯಾದಿಯ ವ್ಯಾಪಾರ ಮುಗಿಸಿ ಮರಳಿ ಮನೆಗೆ ಬಂದೆವು.

Tuesday, December 7, 2010

shravana sukha

ವಾಟ್ ಇಸ್ ಯುವರ್ ಫಾವೊರಿತೆ ಸೌಂಡ್ ಅಂಡ್ ವೈ?


ಈ ಪ್ಲಿನ್ಕ್ಯ್ಗೆ ಯಾರು ಪ್ರಶ್ನೆ ಸೂಚಿಸುತ್ತಾರೋ?

ನನ್ನಂಥಃ ನಿಶಬ್ಧ ಪ್ರಿಯಳು ಏನೆಂದು ಬರೆಯಬೇಕು? ನನಗೋ ಮನೆಯ ನಿತ್ಯಶಬ್ದಗಳೇ ಪ್ರಿಯ.

ಅಪ್ಪ ಕಾಗದ ಕೆಲಸ ಮಾಡುವಾಗ ಹಾಡುತಿದ್ದ ಕುರುಡು ಸುಬ್ಬಿ ಬಂದಳು ಇಲ್ಲಾ ಎಣ್ಣೆಸ್ನಾನಕ್ಕೆ ಹೋಗುವಾಗ ಬಚ್ಕಾಲುಗೀತೆಯಾಗುತಿದ್ದ ನಾನೊಂದು ಮದುವೆಯ ಮಾಡಿಕೊಂಡೆ . ಮರೆಯಲು ಅಸಾಧ್ಯ.

ಅಮ್ಮ ಯಾವಾಗಲು ಅಡಿಗೆಮನೆಯಲ್ಲಿ ಹಾಕುವ ಪ್ರಮಾಣಗಳ ಮಟಮಟಾ-- ಅಂದ್ರೆ ಉಟಕ್ಕೆ ಇಷ್ಟು ಜನ, ಹಾಗಾದರೆ ಇಷ್ಟು ಅಕ್ಕಿ ಹೀಗೆ ಅಡುಗೆ ಮುಗಿಯುವವರೆಗೆ ಲೆಕ್ಕ ನಡೆಯುತಿರುತದೆ. ಅಮ್ಮಮ್ಮ ನನ್ನ ಅಜ್ಜಿ ಪಾರ್ವತಿ. "ಕ್ಯಾ ಗಜ್ಯಬ್ ಕೆ ಜಲ್ವೆ ತೆರೆ ಪಾರೋ " ಅಡಿಗೆಯ ಮನ್ನೆಯಲ್ಲಿ ಶೇಷುಡು ಶಿವುನಿಕೂ ಭೂಶುಡು" ಎಂದು ಹಾಡಿದರೆ ಬಟ್ಟೆvaಣಗಿಸುವಾಗ "ಶ್ಯಾಮ ಸುಂದರ ಸೋದರಿ " ಇಲ್ಲಾ "ರಾಮ ಭಕ್ತಿ ಸಾಮ್ರಾಜ್ಯ ಮೂ " ಯಾವುದಾದರು ಕೃತಿ ಸ್ಮರಿಸುತಿರುವರು. ಪೇಪರ್ ಓದಿಮುಗಿದಮೇಲೆ "ಎಂದರೂ ಮಹಾನುಭಾವುಲು " ನಾವು ಸಾಗುತಿರುವ ದಾರಿ ಸರಿಯಲ್ಲ ವೆಂದು ಸೂಕ್ಷ್ಮವಾಗಿ ತಿಳಿಸಲು "ಮಾಕೆಲರ ವಿಚಾರಮೋ ಮರುಗನ್ನ ಶ್ರೀ ರಾಮಚಂದ್ರ.." ಎಂದು ಉಸಿರಿನಡಿ ಹಾದಲಾರಮ್ಬಿಸುತ್ತಿದ್ದರು.

ಮದುವೆಯಾಗಿ ಇಪತ್ತು ವರ್ಷಗಳ ಅನುಭವ ಪತಿದೇವರು "ಭಾಸ್ಕರ ಹೇ ಗಗನ ರಾಜ " ಎಂದು ಮೈಕಾಸುರನಿಗೆ (ಮೈಕ್ ಅಸುರ ) ಸಾವಾಲು ಎಸೆದರೆ "ಆಲ್ ಇಜ್ ವೆಲ್! "

ಆದರೆ ಅತಿ ಮದುರವಾದ ಶಬ್ದಗಳೆಂದರೆ,ದೊಡ್ಡಮ್ಮ ಜಾನಕಿ ತನ್ನ ಮಮ್ಮಕ್ಕಳೊಂದಿಗೆ ಅವಧಾನ ನಡೆಸುತ್ತಿದ್ದು.

ಇದರ ಬಗ್ಗೆ ಓದಲು ಲಾಗ್ ಆನ್ ಮಾಡಿ ಏನ್.ಅರ.ಕೆ.ಬ್ಲಾಗ್ಸ್ಪಾಟ್.ಕಂ

Monday, December 6, 2010

kasadoddi konkana railway

ನಾವು ರೈಲ್ ಅಂದರೆ ದೊಡ್ದಿಯೆಂದು ತಿಳಿದಿರುವ ಜನಾಂಗ. ಹೇರ ಫೇರಿ ಚಿತ್ರದಲ್ಲಿ, ಪರೇಶ್ ರಾವಲರು ಸುನಿಲ್ ಶೆಟ್ಟರನ್ನು ಸೌಚಾಳಯವಿಲ್ಲ ರೈಲ್ ಪತ್ತ್ರಿಯಲ್ಲಿ ಸುಧಾರಿಸು ಎನ್ನುತಾರೆ.


ಹೋದವಾರ ತೌವರಿಗೆ ಹೋಗುವ ತಯಾರಿಯಲ್ಲಿದ್ದೆ, ಮಡಗೊಂವು ರೈಲು ನಿಲ್ಲುಧನದಲ್ಲಿ ರೈಲಿಗ್ಗಗಿ ನಿಂತ್ತಿದೆವು.ಜೈಪುರದ ಮರುಸಾಗರ ಎಕ್ಷ್ಪ್ರೆಸ್ಸ ಬಂದಿತು, ನೆರೆಯ ಮಲಯಾಳೀ ಯಾತ್ರಿಗಳ ಬೀಡು. ಬೋಬೆ ಹೋಟೆಲ್ ಮಾಣಿಗಳಿಗೊ ಕಂಡಾಬಟ್ಟೆ ಕೆಲಸ. ಮಲಬಾರ್ ಪರೋಟಾಗಳ ವಿತರೆನೆ ಮಾಡಿ ಅದ್ದನ್ನು ಸುತ್ತಿತಂದ ಪಪೆರ್ರನ್ನು ಎದುರಿಗೆ ಎಸದ, ಪಕ್ಕದಲ್ಲೇ ಇದ್ದ ಕಸದಬುಟ್ಟಿಗೆ ಹಾಕಲು ಪಾಪ ವೇಳೆ ಶ್ರಮಗಳ ಅಡಚಣೆ. ಪರೋಟ ತಿಂದ ಮಾಹಶಯರು (ಕಸದಬುಟ್ಟಿ ಮುಂದೆ ನಿಂತು ತಿನ್ದಿರುವರು)ಆದರೂ ರೈಲ್ ಪಟ್ಟ್ರಿಯ ಮೇಲೆಯೇ ಕಸದ ವಿಸರ್ಜನೆ. ಮುಂದೆ ಫ್ರೂಟಿ ಕುಡಿದು ಅದರ ಪೊಟ್ಟಣ -- ಪ್ಲಾಟ್ಫಾರ್ಮ್ ಮೇಲೆ. ಕಾವಲು ಕಾಯುತಿದ್ದ ಪೊಲಿಸನೆಆಗ್ಲಿ ಮಾರಿದ ಅಂಗಡಿಯವನೆ ಆಗಲಿ ಎದುರಿಗೆ ಕಸದಬುಟ್ಟಿ ಇದೆ ಅದಕ್ಕೆ ಯೇಸೆಯಪ್ಪ ಎಂದು ಹೇಳಲ್ಲಿಲ್ಲ.

ನಾನೂ ಅಧಿಕ ಪ್ರಸಂಗಿ, "ಕಸದ ಬುಟ್ಟಿಗೆ ಎಸೆಯೋ ಅಂದರೆ, ಪೋಲಿಸನು ನಕ್ಕು ನನ್ಗನ್ನುತ್ತಾನೆ,"ಮೇಡಂ, ನಾವು ತೊಂಬಾ backwardu ಇದು ಸಿಂಗಾಪುರವಲ್ಲ"ಇದು ಸಿಂಗಪುರವಲ್ಲವೆಂದು ನಾನು ಬಲ್ಲೆ, ಯಾಕಂದರೆ ಸಿಂಗಾಪುರದಲ್ಲಿ ಕಸಬಿಕ್ಕಲು ನಮಗೆಲ್ಲಿ ಧೈರ್ಯ?

ತ್ರೈನಿನೊಳಗೆ ಅನ್ನದತರಾದ ಭಟ್ ಕಾತೆರೆರ್ಸ್,ಚಾ, ಕಾಪಿ ತಂದರೆ ಸಾಮಂತೆಯಿಂದ, ನೆಲ,ಬೆನ್ಚ್ಗಳೊಂದಿಗೆ ಹಂಚುತಾರೆ. ಚಾ ಕುಡಿದು ಕಸ ಎಲ್ಲಪ್ಪ ಹಾಕಲಿ ಅಂತ ಕೇಳಿದರೆ "ಏನು ಮೇಡಂ ಭಾಲಿಷ ಪ್ರಶ್ನೆ ಕೇಳುತೀರಿ ಹೊರಗೆ ಹಾಕಿ" ವೌ ಹೊರಗೆ ಗದ್ದೆ, ಹಾದಿ, ಜನರ ಮೇಲೆ ಬಿದ್ದರೆನಂತೆ?

Sunday, December 5, 2010

ninna neenu maretare?

ಪ್ಲಿನ್ಕ್ಯ್ ನನ್ನ "ಮೋಟೋ " ತಿಳಿಯ ಬಯಸುತಿದೆ, ಮೊಟೋವನ್ನು ಕನ್ನಡಕ್ಕೆ ಹೇಗೆ ಅನುವಾದಿಸಲಿ? ಕನ್ನಡ ಕಸ್ತೂರಿ ಆನ್ಲೈನ್ ಶಬ್ದಕೋಷ ಓದಿದರೆ -- ಧ್ಯೆಯೇ, ಆದರ್ಶ, ಜೀವಾನ್ದುದ್ದೇಶ ಎಂದು ಸಾರುತಿದೆ, 
ಜೀವನ್ದ್ದುಶ ಇವೆಲ್ಲ ಬಹಳ ದೊಡ್ಡದೊಡ್ಡ ಶಬ್ದಗಳು, ನನ್ನ್ಗೆನೋ ಮೋಟೋ ಅಂದರೆ ಈ ಸನ್ನಿವೇಶದಲ್ಲಿ ಸಿದ್ದಾಂತವೆಂದು ತೋರುತಿದೆ, ಏನೆ ಇರಲಿ ಧ್ಯೆಯೇನೋ ಸಿದ್ದನ್ತವೋ ನನ್ನತನವನ್ನು ಉಳಿಸ್ಕೊಂದು ಅನ್ಯರೊಡನೆ ಬಾಳುವುದು ಚೆನ್ನಾಗಿರುತದೆ ಅಲ್ಲವ? 
ನಿನ್ನ ನೀನು ಮರೆತರೇನು ಸುಖವಿದೆ? ತನ್ನತನವ ಮರೆತರೇನು ಸುಖವಿದೆ?
ಈ  ವಿಚಾರಗಳೇ ನನ್ನ ನ್ರತ್ಯ ನಾಟಕ ಪೂರ್ಣಿಮಾದ ಆದರ, ನವರಾತ್ರಿಯ ನವದುರ್ಗ ನಮ್ಮಲ್ಲಿಯ ನವಶಕ್ತಿಯ ಸಂಕೇತ, ಅವುಗಳನ್ನು ನಾವೇ ವಿಕಾಸಗೊಳಿಸಬೇಕು. 

kade tuttu.

ಇಂದು ನನ್ನ ಜೀವನದ ಕಡೇ ಊಟವಾದರೆ ನಾನೇನು ತಿನ್ನಬಯಸುವೆ?
ಪ್ರಶ್ನೆಯೇನೋ ಚನ್ನಾಗಿದೆ ಆದರೆ ಉತ್ತರ ಕೊಡಲು ಪೇಚಾಡುವ ಪ್ರಸಂಗ. ಆದರೂ ಪ್ರಯತ್ನಿಸೋಣ ಬಿಸಿಬೇಳೆಬಾತ್ ಹಾಗೂ ಮೊಸರನ್ನವೆಂದು ಉತ್ತರಿಸಿದರೆ, ಇನ್ತೆರ್ನೆತ್ವಾಸಿಗಳಾದ ಏನ್.ಅರ,ಕೆ  ಅಂದರೆ  ನೋಂ ರೆಸಿಡೆಂಟ್ ಕನ್ನಡಿಗರು ತಟ್ತಂದು ತಿಳಿದರು, ಪೆಚಾದುವವರು ನಮ್ಮ ದೇಶೀ ವಿದೇಶಿಯರು, "ಒಹ್! ತುವರ್ದಾಲ್ pulao" ಎಂದು ಒಬ್ಬಳು ಕರೆದರೆ, ವಾಟ್'ಸ ಇಟ್ ಎಂದು ಇನ್ನೊಬ್ಬಳ ಪ್ರಶ್ನೆ, "ರೈಸ್ ಅಂಡ್ ಯೋಗುರ್ತ್ ಯೌ ಕ್ನೌ " ಪರವಾಗಿಲ್ಲವೇ, ಕೆ.ಬಿ.ಸಿ ಗೆ ಇವರನ್ನು ಕಳಿಸಬಹುದು. "ದಿಸ್ ಇಸ್ ಮಸಾಲ  ಬಾತ್ no" ಎಂದು ತ್ಯಾಕರೆನಾಡಿನ ವೀರ ಮರಾಟಿ ತಾಯಿ. ಮೊಸರನ್ನ್ಕ್ಕೆ, ದಹಿ-ಬುತ್ತಿ ಯಂಬ ನಾಮಕರಣವೂ ಕೇಳಿಬಂತು.  ಇವೆಲ್ಲಗಿಂಥಲೂ ನನ್ನಗೆ ಹಸ್ಯಮಯವೆಸಿದ್ದು ನನ್ನ ೨ ವರ್ಷದ ಮಗಳ ಉತ್ತರ "ಹಾಲು ನೂಡಲ್ಸ್ " ಸ್ವಲ್ಪ ರಿಸರ್ಚ್ ಮಾಡಿದನಂತರ  ಅವಳು ಕೇಳಿದ್ದು ಶ್ಯಾಮಿಗೆ ಪಾಯಸವೆಂದು ತಿಳಿಯಿತು. 

Friday, December 3, 2010

samparkakranti

ಇಂದು ಪ್ಲಿನ್ಕ್ಯ್ಕೇಳಿದ ಪ್ರಶ್ನೆ "ನಿಮಗೆ ಸಧ್ಯ ಯಾವ ಒತ್ತಡವಿದೆ? " 
ಇನ್ನೊಬ್ಬರ ಕರಿಕೆಳಗೆ, ನನ್ನ ಕೆಲಸವನ್ನು ಇನ್ನೊಬ್ಬರ ಸಮಯಕ್ಕೆ ಶರಣಾಗಬೇಕು, ಇಂದರಿಂದ  ಒಂದುಹೊದೆಥಕ್ಕೆ ಆಗಬೇಕ್ಕಾದ ಕೆಲಸಕ್ಕೆ ಮೂರು ಸಾರಿ ಹೋಗಬೇಕಾಗುತ್ತದೆ. ಇಂಟರ್ನೆತ್ತೋ ಅದು ಕನ್ನಮುಚಾಳೆ ಆಡುತಿದೆ, ಬ್ರಮರದ್ವಾನಿ ಸಂಚಾಲನೆಯಲ್ಲಿ ಇಲ್ಲ, ಇನ್ನು ಸ್ಕೂಟರ್ ಸ್ಟ್ರೈಕ್ ಮಾಡುತ್ಹಿದೆ, ಕಾರು ಓಡಿಸಲು ನನಗೆ ಲೈಸೆನ್ಸೆ ಇಲ್ಲ, ಬಹುಶಃ  ಇದೆ ಸಂಪರ್ಕಕ್ರಾಂತಿ ಇರಬೇಕು.

Wednesday, December 1, 2010

cinema cinema

ಪ್ಲಿನ್ಕ್ಯ್ ಪ್ರನ್ಶ್ನೆ  ಇಂದು ,"ನನ್ನ ಪ್ರೀತಿಯ ಚಲನಚಿತ್ರ "
ನಿಜ ಹೇಳಲು ನಾನು ಶಂಕರ್ನಾಗ್ ಫ್ಯಾನ್, ಆದರು ನನ್ನ ನನಪಿನ ದೋಣಿಯಲ್ಲಿ ಉಳಿದ ಚಿತ್ರವೆಂದರೆ "ಬಹಾದುರ್ ಗಂಡು" 
ಆಗ ನಾನು ಐದನೇ ತರಗತಿ, ತಮ್ಮ ಶಾಂತರಾಮ ಮೂರನೆಯ ತರಗತಿ, ನಮ್ಮ ತಂದೆಗೋ ಆಸ್ಪತ್ರೆಯಿಂದ ಹೊತ್ತಿಗೆ ಉಟಕ್ಕೆ ಬಂದದಿನ ಹಬ್ಬ. ಆದರೂ ನಮ್ಮ ಪರೀಕ್ಷೆ ಮುಗಿದ ಮರುದಿನ ನಮ್ಮನ್ನು ಅಂದರೆ, ಶಾಂತರಾಮ್ ನಾನು ಪಪ್ಪಾ  ಅಮ್ಮನಿಲ್ಲದೆ ಸಿನೆಮಾ ನೋಡಲು ಹೋಗುತಿತ್ತು ಮಣಿಪಾಲದಿಂದ ಉಡುಪಿ, ಅಲ್ಲಿಂದ ಮಂಗಳೂರು ಅಲ್ಲಿ ಗಣೇಶ ಭವನದಲ್ಲಿ ಮಸಾಲದೋಸೆ ಯಾವುದೋ ಪುಸ್ತಕಬಂದರ ಈಗ ಹೆಸರೂ ನನಪಿಲ್ಲ ಇಬ್ಬರಿಗೂ ಒನ್ನೊಂದು ಅಮರಚಿತ್ರ ಕಥೆ, ಮತ್ತೆ ಸಿನಿಮಾ ಪಾಪ ಕರೆದುಕೊಂಡು ಹೋಗುವ ಸಂಬ್ರಮದಲ್ಲಿ ಯಾವ ಸಿನೆಮಕ್ಕು ನಾವು ರೆಡಿ. ಹತ್ತಿರದ ಜ್ಯೋತಿ ತಲ್ಕೀಸ್-ಅಲ್ಲಿ ಇದ್ದ ಚಿತ್ರ ಬಹಾದುರ್ ಗಂಡು,ತಮ್ಮನಿಗೋ ರಾಜಕುಮಾರ ಹೀರೋ, ಸೊ ನಾವು ಬಹಾದುರ್ ಗಂಡು ನೋಡಿತು, ಮತ್ತೆ  ಹೊಟ್ಟೆಪೂಜೆ ವೇಳೆ. ಕೋಮಲ್'ಸ  ಕಟ್ಲೆಟ್  ಚಾಕಲೇಟ್ ಐಸ್ಕ್ರೀಂ ಔತಣ. ಮತ್ತೆ ಮರುಳಿ ಮನೆಗೆ, ಬರುವ ದಾರಿಯುದ್ದಕ್ಕೂ ತಮ್ಮನ ಬಹಾದುರ್ ಗಂಡು ಗುಣಗಾನ, ಇಂದಿನವರೆಗೂ ಉಳಿದ ನನಪುಗಳು, ಈ ಸ್ಮ್ರಿತಿಯು ಅಮಾಯಕ ಬಾಲ್ಯದ್ದೋ, ಅಪರುಪಕ್ಕ ಅಪ್ಪನ ಸಹವಾಸವೋ ಅರಿಯೆ, ಆದರೂ ಸ್ಮರಣಿಯ ಸಿನಿಮಾ ಅಂದರೆ ಬಹಾದುರ್ ಗಂಡು.