Wednesday, December 8, 2010

Kannada-- travel through sringeri.

 ಶೃಂಗೇರಿಗೆ ಚಿಕ್ಕಂದಿನಲ್ಲಿ ಹೋದ ನೆನಪು.


ಮುಜಾವ ಏಳು ಗಂಟೆಗೆ ಮನೆ ಬಿಟ್ಟ ನಾವು ಹಿರಿಯಡ್ಕ, ಪೆರದೂರು, ಶಿವಪುರ, ದಾಟಿ ಸೋಮೇಶ್ವರ ತಲುಪಿದೆವು, ಅಲ್ಲಿ ಹೊಟ್ಟೆಪೂಜೆ ಮುಗಿಸಿ ಮುಂದೆ ಮಲನಾದ ನಿಸರ್ಗ. ಆಗುಂಬೆ, ಶೃಂಗೇರಿ. ಪುಣ್ಯಕ್ಕೆ ಶ್ರೀನ್ಗೆರಿಯಿನ್ನು ಪ್ರವಾಸಿಗಳ ದಾಳಿ ಕಂಡಿಲ್ಲ. ದೇವಿದರ್ಶನಕ್ಕೆ ಹನುಮಂತನ ಬಾಲವಿಲ್ಲ ಗುರುದರ್ಶನಕ್ಕೆ ಟಿಕೆಟ್ ಬಂದಿಲ್ಲ.

ದೇವಿ ದರ್ಶನ ಪಡೆದು ಗುರುಗಳನ್ನು ಭೇಟಿಯಾಗಲು ಹೋದೆವು. ನಮ್ಮ ಮುಂದೆ ಇದ್ದ ಪ್ರತೀ ಒಬ್ಬರನ್ನು ಆದರದಿಂದ ಮಾತನಾಡಿಸಿ ಮನಸ್ಸಿಗೆ ಧೈರ್ಯ ನೀಡುತಿದ್ದರು ಗುರುಗಳು. ತಂದೆಯ ಬಳಿಗೆ ಹೋದ ಅದೇ ರಕ್ಷಾ ಕವಚದ ಅನುಭವ.

ಅಲ್ಲಿಂದ ಹಿಂತಿರುಗುವಾಗ ಕಂಡ ಅನ್ಜೀರದ ಮರ, ಬೇರಿಂದಲೂ ಅಂಗೀರ ಉದ್ಭವಿಸಿತ್ತು, ಪಾಠ ಶಾಲೆಯ ವಟುವರು ತಮ್ಮ ಅನುಭವಗಲಳನ್ನು ತಮ್ಮ ಕನಸುಗಲಳನ್ನು ನಮ್ಮೊಂದಿಗೆ ಹಂಚಿಕೊಂಡರು.

ಹರಿವನದಿಯಲ್ಲಿಯ ಮೀನು, ಮುಂಡಕ್ಕಿ ಎಸೆದರು ಅದರೆಡೆಗೆ ಬರುವುದ್ದಿಲ್ಲ, ಆದೇ ಬಿಸ್ಕೆಟ್ ಅಥವಾ ರಸ್ಕ್ ಎಸೆದರೆ ದಡೀರೆಂದು ಹಾಜೀರ್. ಕಿವಿ ಸುರಿದ ಮೀನಿನ ದರ್ಶರ್ನವೂ ಆಯಿತು.

ದೇವಿಯ ಪ್ರಸಾದ ಉಂಡು ಶೃಂಗೇರಿಯ ಪೇಟೆಯಲ್ಲಿ ಉಪ್ಪಿನkaaಯಿ ಇತ್ಯಾದಿಯ ವ್ಯಾಪಾರ ಮುಗಿಸಿ ಮರಳಿ ಮನೆಗೆ ಬಂದೆವು.

1 comment:

  1. your experience has made me enjoy, felt as if i was along with you ,photos were good ,fish with earring is the one i missed or not given attention to wait for that fish to come, may be next time i will put candies so that i get to see FISH with earring.one thing i missed was the taste of the Pickels.Uppinakaee sad sad.

    ReplyDelete